Index   ವಚನ - 1    Search  
 
ಅಂಗದ ಕಳವು ಕೈಯಲ್ಲಿದ್ದಂತೆ ಹಿಂಗುವದಕ್ಕೆ ನಾಲಿಗೆಯೇಕೊ? ಪರರಂಗವನರಿದು ಹೆರರಂಗದಲ್ಲಿ ಸಿಲ್ಕಿ ಭಂಗಿತನಾಗಲೇಕೊ? ನದಿಯೊಳಗೆ ಮುಳುಗಿ ತನ್ನೊಡವೆಯ ಸುದ್ಧಿ ಯಾಕೊ? ಅದರ ವಿಧಿ ನಿಮಗಾಯಿತ್ತು, ಬಿಡು ಕಡುಗಲಿತನವ ನಿಃಕಳಂಕ ಮಲ್ಲಿಕಾರ್ಜುನಾ.