Index   ವಚನ - 2    Search  
 
ಅಂಗದ ನಿರಾಭಾರಿಗಳೆಲ್ಲರೂ ಕೂಡಿ, ಲಿಂಗದ ಹೊಲಬ ಬಲ್ಲೆವೆಂದು, ಅನಂಗನ ಬಲೆಯೊಳಗಿಲ್ಲವೆಂದು, ಸಕಲರ ಸಂಸರ್ಗವನೊಲ್ಲೆವೆಂದು ಮತ್ತೆ ಅಖಿಲರೊಳಗೆ ಸಕಲಭೋಗವನುಂಡು, ವಿಕಳಗೊಂಡವರ ನೋಡಾ. ಪ್ರಕೃತಿ ಹರಿಯದೆ, ಸುಖವ ಮೆಚ್ಚಿ ತಿರುಗದೆ, ಇಂತಿಹ ಅಖಿಳಂಗೆ ನಮೋ ನಮೋ, ನಿಃಕಳಂಕಮಲ್ಲಿಕಾರ್ಜುನಾ.