•  
  •  
  •  
  •  
Index   ವಚನ - 749    Search  
 
ಅಟ್ಟುದನಡಲುಂಟೆ? ಸುಟ್ಟುದ ಸುಡಲುಂಟೆ? ಜ್ಞಾನಾಗ್ನಿಯಲ್ಲಿ ದಗ್ಧವಾದ ಪರಮ ಶಿವಯೋಗಿಗೆ ಹುಟ್ಟು ಹೊಂದೆಂಬ ಉಭಯ ಜಡತೆಯುಂಟೆ? ಅದೆಂತೆಂದಡೆ: ``ದಗ್ಧಸ್ಯ ದಹನಂ ನಾಸ್ತಿ ಪಾಕಸ್ಯ ಪಚನಂ ನ ಹಿ| ಜ್ಞಾನಾಗ್ನಿರ್ದಗ್ಧದೇಹಸ್ಯ ನ ಚ ದಾಹೋ ನ ಚ ಕ್ರಿಯಾ|| '' ಎಂದುದಾಗಿ ನಮ್ಮ ಗುಹೇಶ್ವರಲಿಂಗವನೊಡಗೂಡಿ, ಎರಡಳಿದು ನಿಂದ, ಮಹಾಮಹಿಮಂಗೆ ಪರಿಭವವಿಲ್ಲ ಕಾಣಿರೊ.
Transliteration Aṭṭudanaḍaluṇṭe? Suṭṭuda suḍaluṇṭe? Jñānāgniyalli dagdhavāda parama śivayōgige huṭṭu hondemba ubhaya jaḍateyuṇṭe? Adentendaḍe: ``Dagdhasya dahanaṁ nāsti pākasya pacanaṁ na hi| jñānāgnirdagdhadēhasya na ca dāhō na ca kriyā||'' endudāgi nam'ma guhēśvaraliṅgavanoḍagūḍi, eraḍaḷidu ninda, mahāmahimaṅge paribhavavilla kāṇiro.
Hindi Translation पकाये हुए को पका सकते ? जलाये हुए को जला सकते ? ज्ञानाग्नि में दग्ध हुए परम शिवयोगी को जनन मरण उभय का भय है ? वह कैसे कहें तो- "दग्धस्य दहनं नास्ति पाकस्य पचनं नही। ज्ञानाग्नि र्दग्ध देहस्य न च दाहो न च क्रिया"॥ वैसे- हमारे गुहेश्वर लिंग से मिलकर, द्वैत मिठा खड़ा , महामहिम को पराजय नहीं देखो। Translated by: Eswara Sharma M and Govindarao B N