ವಚನ - 750     
 
ಅಣುವಿಂಗೆ ಅಣು ಮಹತ್ತಿಂಗೆ ಮಹತ್ತು ಆದಲ್ಲಿ ಮರದೊಳಗಣ ಪತ್ರಫಲಂಗಳು ಕಾಲವಶದಲ್ಲಿ ತೋರುವಂತೆ ಹರನೊಳಗಣ ಲೀಲಾಪ್ರಕೃತಿ ಸ್ವಭಾವ ಹರಲೀಲಾ ವಶದಲ್ಲಿ ತೋರುವುದು ಶಿವನೆ ಚೈತನ್ಯಾತ್ಮನು ಚಿತ್ ಸ್ವರೂಪನೆಂದರಿಯಬಲ್ಲರೆ ಭಿನ್ನವೆಲ್ಲಿಯದೂ ಗುಹೇಶ್ವರಾ.