Index   ವಚನ - 53    Search  
 
ಅರಿವನರಿವನ್ನಕ್ಕ ಅರ್ಚನೆ ಬೇಕು. ಪುಣ್ಯವನರಿವನ್ನಕ್ಕ ಪೂಜೆ ಬೇಕು. ತಾನೆಂಬುದನರಿವನ್ನಕ್ಕ ಎಲ್ಲ ನೇಮವ ಭಾವಿಸಬೇಕು. ಕಾಲ ಕರ್ಮ ಜ್ಞಾನ ಭಾವ ತಾನುಳ್ಳನ್ನಕ್ಕ ಭಾವಿಸಬೇಕು. ತನ್ನ ಮರೆದು, ವಸ್ತುವ ಕುರಿತು ನಿಂದ ಮತ್ತೆ ಬತ್ತಲೆ ಹೋಹವಂಗೆ ಎತ್ತಲೂ ಭಯವಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.