Index   ವಚನ - 54    Search  
 
ಅರಿವ ಮನ ಏಕವಾಗಿಯಲ್ಲದೆ, ವಸ್ತುವನೊಡಗೂಡಬಾರದು. ಹುರಿ ರಜ್ಜು ಒಂದೆ ಗಡಣದಲ್ಲಿಯಲ್ಲದೆ ಎಡಬಲಕ್ಕಿಲ್ಲ. ಆ ಉಭಯದ ಬಿಡುಗಡೆಯರಿದು, ಅಡಗಿಯಲ್ಲದೆ ಸ್ವಯಂಭುವಲ್ಲ. ನಿಃಕಳಂಕ ಮಲ್ಲಿಕಾರ್ಜುನಾ.