ಅತ್ತಲಿಂದ ಒಂದು ಪಶುವು ಬಂದು,
ಇತ್ತಲಿಂದ ಒಂದು ಪಶುವು ಬಂದು,
ಒಂದರ ಮೋರೆಯನೊಂದು ಮೂಸಿ ನೋಡಿದಂತೆ,
ಗುರುವು ಗುರುವಿನೊಳಗೆ ಸಂಬಂಧವಿಲ್ಲ
ಶಿಷ್ಯರು ಶಿಷ್ಯರೊಳಗೆ ಸಂಬಂಧವಿಲ್ಲ,
ಭಕ್ತರಲಿ ಭಕ್ತರಲಿ ಸಂಬಂಧವಿಲ್ಲ.
ಈ ಕಲಿಯುಗದೊಳಗುಪದೇಶವ ಮಾಡುವ
ಹಂದಿಗಳಿರಾ ನೀವು ಕೇಳಿರೊ,
ಗಂಡಗೆ ಗುರುವಾದಡೆ ಹೆಂಡತಿಗೆ ಮಾವನೆ?
ಹೆಂಡತಿಗೆ ಗುರುವಾದಡೆ ಗಂಡಂಗೆ ಮಾವನೆ?
ಗಂಡ ಹೆಂಡತಿಗೆ ಗುರುವಾದಡೆ
ಇವರಿಬ್ಬರೇನು ಒಡಹುಟ್ಟಿದರೆ?
ಈ ಭೇದವನರಿಯದೆ ದೀಕ್ಷೆ ಕಾರಣವ
ಮಾಡುವಾತ ಗುರುವಲ್ಲ.
ಈ ಕಳೆಯ ಕುಲವನರಿಯದಾತ ಶಿಷ್ಯನಲ್ಲ.
ಈ ಭೇದವನರಿದು ಕಾರಣ್ಯವ
ಮಾಡುವ ಗುರುಶಿಷ್ಯ ಸಂಬಂಧವೆಲ್ಲ
ಉರಿ ಕರ್ಪುರ ಸಂಯೋಗದಂತಹುದು
ಕಾಣಾ ಗುಹೇಶ್ವರಾ.
Transliteration Attalinda ondu paśuvu bandu,
ittalinda ondu paśuvu bandu,
ondara mōreyanondu mūsi nōḍidante,
guruvu guruvinoḷage sambandhavilla
śiṣyaru śiṣyaroḷage sambandhavilla,
bhaktarali bhaktarali sambandhavilla.
Ī kaliyugadoḷagupadēśava māḍuva
handigaḷirā nīvu kēḷiro,
gaṇḍage guruvādaḍe heṇḍatige māvane?
Heṇḍatige guruvādaḍe gaṇḍaṅge māvane?
Gaṇḍa heṇḍatige guruvādaḍe
ivaribbarēnu oḍahuṭṭidare?
Ī bhēdavanariyade dīkṣe kāraṇava
māḍuvāta guruvalla.
Ī kaḷeya kulavanariyadāta śiṣyanalla.
Ī bhēdavanaridu kāraṇyava
māḍuva guruśiṣya sambandhavella
uri karpura sanyōgadantahudu
kāṇā guhēśvarā.
Hindi Translation उधर से एक पशु आकर, इधरसे एक पशु आकर,
एक का मुहँ एक सूंघ देखने जैसे,
गुरु गुरुओं में संबंध नहीं ; शिष्य शिष्यों में संबंध नहीं।
भक्त भकतों में संबंध नहीं ।
इस कलियुग में उपदेश करनेवाले सुअर तुम सुनिए-
पति को गुरु हो तो पत्नि का ससुर है?
पत्नि को गुरु हो तो पति का ससुर है?
पति पत्नि को गुरु हो तो ये दोनों सगे पैदा हुए हैं?
यह भेद न जाने दीक्षा करनेवाला गुरु नहीं।
इस चिखुरन का कुल न जाननेवाला शिष्य नहीं ,
यह भेद जानकर कामकरनेवाले गुरू शिष्य सब संबंध
आगकपूर संयोग जैसे रहता देखा गुहेश्वरा ।
Translated by: Eswara Sharma M and Govindarao B N