Index   ವಚನ - 70    Search  
 
ಅಹುದಹುದು, ಮಹಾಂತಿನ ಮನ ಎಲ್ಲರಿಗೆಲ್ಲಿಯದೊ ? ಆ ಚಿದ್ರೂಪ ಚಿನ್ಮಯನ ಅನುವನರಿಯದೆ, ಮಹಾಂತಿನ ಕೂಡಲಸಂಗದೇವರೆಂಬ ಮೂಕೊರೆಯರನೇನೆಂಬೆಯ್ಯಾ ? ಹಾಗದಾಸೆಗೆ ಶಿಲೆಯ ಮಾರುವ ಕಲ್ಲುಕಟಿಗರ, ದಾಯಾದ್ಯರ, ಮಹಾಂತಿನ ಕೂಡಲದೇವರೆನಬಹುದೆ ? ವೀರಶೈವದ ನಿರ್ಣಯವ ತಿಳಿಯರು. ಭಕ್ತಿ ಜ್ಞಾನ ವೈರಾಗ್ಯದ ಆಚಾರದ ಅನುಭಾವದ ಅನುವನರಿಯರು. ಆರುಸ್ಥಲದಂತಸ್ಥವನರಿಯರು. ಮೂರುಸ್ಥಲದ ಮೂಲವ ಮುನ್ನವರಿಯರು. ಭಕ್ತಿಗೆ ಆರಕ್ಷರದ ಆದ್ಯಂತವನರಿಯದ ಮಂದಮತಿಗಳ ಮಹಾಂತಿನ ಕೂಡಲದೇವರೆಂದು ನುಡಿವ ನರಕಿಜೀವಿಗಳ ಮುಖವ ನೋಡಲಾಗದಯ್ಯಾ, ನಿಃಕಳಂಕ ಮಲ್ಲಿಕಾರ್ಜುನಾ.