•  
  •  
  •  
  •  
Index   ವಚನ - 753    Search  
 
ಅದ್ವೈತವೆಂಬ ಶಿಶುವೆನ್ನ ಕರಸ್ಥಲವ ಸೋಂಕಲೊಡನೆ ಎನ್ನ ತನ್ನಂತೆ ಮಾಡಿತ್ತಾಗಿ, ಎನ್ನ ನಾನೆಂಬ ವಿಚಾರವು ಅರತು ಹೋಯಿತ್ತು ಕೇಳಾ. ಮತ್ತೆ ಅನ್ಯವಿಚಾರವನೆಂತೂ ಅರಿಯೆನು. ಎನ್ನ ಪೂರ್ವಾಪರವ ನಿಮ್ಮಿಂದಲರಿಯಲೆಂದು ಬಂದು ನಿಮ್ಮ ಮರೆಹೊಕ್ಕೆನಾಗಿ, ಸಂಗನಬಸವಣ್ಣನ ಮಹಿಮೆಯ ನಾನೆತ್ತ ಬಲ್ಲೆನು? ಗುಹೇಶ್ವರ ಲಿಂಗವು ಸಾಕ್ಷಿಯಾಗಿ ಸಂಗನಬಸವಣ್ಣ ನಿನ್ನ ಅಂತರಂಗದೊಳಗೆ ಬೆಳಗುತ್ತೈದಾನೆ. ಎನಗೊಮ್ಮೆ ಸಂಗನಬಸವಣ್ಣನ ಶ್ರೀಪಾದದ ಘನವ ತಿಳುಹಿ ಕೊಡಾ ಚೆನ್ನಬಸವಣ್ಣಾ.
Transliteration Advaitavemba śiśuvenna karasthalava sōṅkaloḍane enna tannante māḍittāgi, enna nānemba vicāravu aratu hōyittu kēḷā. Matte an'yavicāravanentū ariyenu. Enna pūrvāparava nim'mindalariyalendu bandu nim'ma marehokkenāgi, saṅganabasavaṇṇana mahimeya nānetta ballenu? Guhēśvara liṅgavu sākṣiyāgi saṅganabasavaṇṇa ninna antaraṅgadoḷage beḷaguttaidāne. Enagom'me saṅganabasavaṇṇana śrīpādada ghanava tiḷuhi koḍā cennabasavaṇṇā.
Hindi Translation अद्वैत जैसे शिशु मेरी हथेली छूते ही मुझे अपने जैसे कर चुकने से, मेरा मैं जैसे विचार दूर हुआ था सुनो। और अन्य विचार तो नहीं जानता। मेरे पूर्वापर तुमसे जानने आकर तुमारी शरण में आने से, संगनबसवण्णा की महिमा मैं कैसे जानता ? गुहे्श्वर ही साक्षी बनकर संगनबसवण्णा तेरे अंतरंग में चमक रहा है। मुझे एक बार बसवण्णा का घन समझा दो चेन्नबसवण्णा। Translated by: Eswara Sharma M and Govindarao B N