ಆದಿಶೂನ್ಯಲಿಂಗಕ್ಕೆ ಮಜ್ಜನವಾವುದು ?
ಕುಸುಮಭರಿತಲಿಂಗಕ್ಕೆ ಪೂಜೆ ಯಾವುದು ?
ಪರಿಪೂರ್ಣಲಿಂಗಕ್ಕೆ ನೈವೇದ್ಯವಾವುದು ?
ಅರ್ಪಿಸುವುದಕ್ಕೆ ಮುನ್ನವೆ ತೃಪ್ತಿಯಾದ ಮತ್ತೆ
ಮುಟ್ಟಿ ಕೂಡುವ ಠಾವಿನ್ನಾವುದೊ ?
ಅಟ್ಟ ಮಡಕೆಯ ನೆತ್ತಿಯ ಮೇಲೆ ಹೊತ್ತು ತಿರುಗುವನಂತೆ,
ಹೊಟ್ಟೆಗೆ ಕಾಣದೆ ಇವರು ಕೆಟ್ಟ ಕೇಡ ನೋಡಿರೆ.
ಈ ಬಟ್ಟೆಯ ಮೆಟ್ಟದಂತೆ ಮಾಡಾ, ನಿಃಕಳಂಕ ಮಲ್ಲಿಕಾರ್ಜುನಾ.