Index   ವಚನ - 95    Search  
 
ಅರೂಢನಾಗಿ ತಿರುಗಿ, ಮೂಢರ ಬಾಗಿಲಲ್ಲಿ ನಿಂದು, ಬೇಡಲೇಕೆ ಭಿಕ್ಷವ ? ಕಾಡಲೇಕೆ ಮರ್ತ್ಯರ ? ರೂಢಿಯೊಳಗೆ ಸಿಕ್ಕಿ ಅಡುವಂಗೆ, ಆ ರೂಢಿ ಬೇಡಾ ಎಂದೆ, ನಿಃಕಳಂಕ ಮಲ್ಲಿಕಾರ್ಜುನಾ.