Index   ವಚನ - 94    Search  
 
ಅರುದರುಶನದೊಡೆಯನ ಅಂತರಂಗದೊಳಿಪ್ಪ ಅರಿಗಾದಡೆ[ಯೂ] ಗಗನ ಭುವನವೊಂದೆ ಎಂದುದಾಗಿ, ಮಹಾಬಯಲು ಕಡಿದು ಎರಡ ಮಾಡಿಹೆನೆಂದು, ಆ ಬಯಲು ಎರಡಹುದೆ ? ಅಣುರೇಣು [ತೃಣಕಾಷ್ಠ] ಮಧ್ಯ ಗುಣಭರಿತ ಅಖಂಡ ಬ್ರಹ್ಮವ ಪ್ರಾದೇಶಿಕ ಪರಿಚ್ಛಿನ್ನವೆಂದು ನುಡಿಯಲುಂಟೆ ನಿಃಕಳಂಕ ಮಲ್ಲಿಕಾರ್ಜುನಾ ?