Index   ವಚನ - 102    Search  
 
ಆಳು ಸಿಕ್ಕಿದಲ್ಲಿ ಕೈದುವಿನ ಒರೆಯ ತೆಗೆಯಬೇಕಲ್ಲದೆ, ಅವಧಿಗೆ ಬಂದಲ್ಲಿ ಒದಗಬೇಕಲ್ಲದೆ, ಬಯಲ ಚಿಪ್ಪಿರಿದು ಬೆಲ್ಲವ ಮೆದ್ದೆನೆಂದಡೆ ಮೆಚ್ಚುವರೆ ? ಗೆಲ್ಲದ ಜೂಜು, ಕೊಲ್ಲದ ಅರಿಗಳ ಬಲ್ಲವರು ಮೆಚ್ಚುವರೆ ? ಸೊಲ್ಲಿನ ಮಾತಿಂಗೆ ನೆರೆ ಬಲ್ಲವರು ಸಿಕ್ಕುವಡೆ, ಗೆಲ್ಲ ಗೂಳಿತನವೆ ? ಬರಿಯ ಚೀರದ ಪಸರಕ್ಕೆ ಲಲ್ಲೆಯ ಮಾತೇ ಒಳ್ಳಿಹ ನಿಃಕಳಂಕ ಮಲ್ಲಿಕಾರ್ಜುನನ ಸಂಗ.