ಅನಾದಿ ಗಣನಾಥನ ಶಿಷ್ಯನು ಆದಿ ಗಣನಾಥನು.
ಆದಿ ಗಣನಾಥನ ಶಿಷ್ಯನು ಅಧ್ಯಾತ್ಮ ಗಣನಾಥನು.
ಅಧ್ಯಾತ್ಮ ಗಣನಾಥನ ಶಿಷ್ಯನು ಆತ್ಮ ಗಣನಾಥನು.
ಆತ್ಮ ಗಣನಾಥನ ಶಿಷ್ಯನು ವ್ಯೋಮಸಿದ್ಧ ಗಣನಾಥನು
ವೋಮಸಿದ್ಧ ಗಣನಾಥನ ಶಿಷ್ಯನು
ಬಸವನೆಂಬ ಗಣನಾಥನು.
ಬಸವನೆಂಬ ಗಣನಾಥನ ಶಿಷ್ಯನು
ಅನಿಮಿಷನೆಂಬ ಗಣನಾಥನು.
ಅನಿಮಿಷನೆಂಬ ಗಣನಾಥನ ಶಿಷ್ಯನು
ಅಲ್ಲಮಪ್ರಭುವೆಂಬ ಗಣನಾಥನು.
ಇಂತು ಅನಾದಿವಿಡಿದು ಬಂದ ಅನುಪಮಲಿಂಗವು,
ಗುಹೇಶ್ವರನೆಂಬ ಹೆಸರನೊಳಕೊಂಡು,
ಎನ್ನ ಕರಸ್ಥಲಕ್ಕೆ ಸಾಧ್ಯವಾಯಿತ್ತು ಕಾಣಾ ಸಿದ್ಧರಾಮಯ್ಯಾ.
Transliteration Anādi gaṇanāthana śiṣyanu ādi gaṇanāthanu.
Ādi gaṇanāthana śiṣyanu adhyātma gaṇanāthanu.
Adhyātma gaṇanāthana śiṣyanu ātma gaṇanāthanu.
Ātma gaṇanāthana śiṣyanu vyōmasid'dha gaṇanāthanu
vōmasid'dha gaṇanāthana śiṣyanu
basavanemba gaṇanāthanu.
Basavanemba gaṇanāthana śiṣyanu
animiṣanemba gaṇanāthanu.
Animiṣanemba gaṇanāthana śiṣyanu
allamaprabhuvemba gaṇanāthanu.
Intu anādiviḍidu banda anupamaliṅgavu,
guhēśvaranemba hesaranoḷakoṇḍu,
enna karasthalakke sādhyavāyittu kāṇā sid'dharāmayyā.
Hindi Translation अनादि गणनाथ का शिष्य आदि गणनाथ।
आदि गणनाथ का शिष्य अध्यात्म गणनाथा।
अध्यात्म गणनाथ का शिष्य आत्म गणनाथ।
आत्म गणनाथ का शिष्य व्योमसिद्ध गणनाथ।
व्योमसिद्ध गणनाथ का शिष्य बसव जैसा गणनाथ।
बसव जैसा गणनाथ का शिष्य अनिमिष गणनाथ|
अनिमिष गणनाथ का शिष्य अल्लमप्रभु जैसा गणनाथ
ऐसे अनादि से आया अनुपमलिंग,
गुहेश्वर जैसा नाम लेकर,
मेरे करस्थल पर साध्य हुआ था देखा सिद्धरामय्या।
Translated by: Eswara Sharma M and Govindarao B N