ಈದ ಪಶುವಿನ ಮೊಲೆಯಲ್ಲಿ ಕೈಯನಿಕ್ಕಿದಡೆ ಕ್ಷೀರವಲ್ಲದೆ,
ಬಂಜೆಯಾವಿನ ಮೊಲೆಯಲ್ಲಿ ಉಂಟೆ ?
ಇದರಂದವ ತಿಳಿವುದು ಲಿಂಗಾಂಗಿಗಳು.
ಹೊತ್ತು ತುಂಬಿದವಳು ಬಲ್ಲಳು ತನ್ನ ನಿತ್ತರಿಸುವ ಬೇನೆಯ.
ಭಕ್ತಿಯುಳ್ಳವರು ಬಲ್ಲರು ನಿಶ್ಚಟದ ಲಿಂಗಾಂಗಿಗಳ.
ಇಂತೀ ಸತ್ಯವನರಿಯದೆ ಹೊತ್ತು ಹೋಕನಾಗಿ ನುಡಿವ
ಮರ್ತ್ಯರಿಗೇಕೆ, ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Īda paśuvina moleyalli kaiyanikkidaḍe kṣīravallade,
ban̄jeyāvina moleyalli uṇṭe?
Idarandava tiḷivudu liṅgāṅgigaḷu.
Hottu tumbidavaḷu ballaḷu tanna nittarisuva bēneya.
Bhaktiyuḷḷavaru ballaru niścaṭada liṅgāṅgigaḷa.
Intī satyavanariyade hottu hōkanāgi nuḍiva
martyarigēke, niḥkaḷaṅka mallikārjunā.