Index   ವಚನ - 130    Search  
 
ಉಂಬ ಊಟ ನಿನಗೊ, ಅಶನಕ್ಕೊ ಎಂಬುದನರಿ, ಮಾಡುವ ಭಕ್ತಿ ಮಾಡುವಂಗೊ, ಮಾಡಿಸಿಕೊಂಬವಂಗೊ ಎಂಬುದ ತಿಳಿದ ಮತ್ತೆ ಹೋರಿ ಆರ್ಜವ ಮಾಡಲೇಕೆ ? ಎಂಬುದ ತಿಳಿದ ಕೊಂಡು ಬಪ್ಪಂತೆ, ತಾ ತನ್ನ ತಿಳಿದ ಮತ್ತೆ ಅನ್ಯವೇಕೊ, ನಿಃಕಳಂಕ ಮಲ್ಲಿಕಾರ್ಜುನಾ?