Index   ವಚನ - 131    Search  
 
ಉಂಬ ತಳಿಗೆಯ ಬೆಳಗಿದಡೆ ನೊಂದಿತ್ತೆ, ನನ್ನ ಬೆಳಗಿದರೆಂದು ? ಬೆಂದ ಮಸಿಯ ತೊಳೆದಡೆ ನೊಂದಿತ್ತೆ, ಎನ್ನ ಹೊರೆಯನೆತ್ತಿದರೆಂದು? ಅಂಧ ಮಂದರಂದವ ನುಡಿದಡೆ ನೊಂದು ಬೇಯಲೇಕೆ ? ಅವರು ನೊಂದರೂ ನೋಯಲಿ ಹಿಂಗಬೇಕೆಂದೆ ನಿಃಕಳಂಕ ಮಲ್ಲಿಕಾರ್ಜುನಾ.