ಉದಕದ ಬಾಯಲಲಿ ಒಂದು ರಸದ ಗಿರಿ ಹುಟ್ಟಿ,
ಹೊಸಮಾಣಿಕ್ಯವ ನುಂಗಿತ್ತ ಕಂಡೆ.
ನುಂಗುವಾಗ ಒಂದು, ಗುಟುಕಿಸುವಾಗ ಎರಡು,
ಸ್ವಸ್ಥಾನದಲ್ಲಿ ನಿಂದಾಗ ಮೂರು,
ಅದರಂಗವ ತಿಳಿದು ಕಳೆಯಬಲ್ಲಡೆ
ನಿಃಕಳಂಕ ಮಲ್ಲಿಕಾರ್ಜುನ ಲಿಂಗವ ಬಲ್ಲವ.
Art
Manuscript
Music
Courtesy:
Transliteration
Udakada bāyalali ondu rasada giri huṭṭi,
hosamāṇikyava nuṅgitta kaṇḍe.
Nuṅguvāga ondu, guṭukisuvāga eraḍu,
svasthānadalli nindāga mūru,
adaraṅgava tiḷidu kaḷeyaballaḍe
niḥkaḷaṅka mallikārjuna liṅgava ballava.