Index   ವಚನ - 134    Search  
 
ಉದಕದಲ್ಲಿ ತೊಳೆದು ಕಂಡೆಹೆನೆಂದಡೆ ಮಲಿನವಲ್ಲ. ಪುಷ್ಪದಲ್ಲಿ ಪೂಜಿಸಿ ಕಂಡೆಹೆನೆಂದಡೆ, ಹೊತ್ತಿನ ವೇಳೆಗೆ ಬಂದು ಗೊತ್ತು ಮುಟ್ಟುವನಲ್ಲ. ನಾನಾ ಉಪಚಾರದಿಂದ ಭಾವಿಸಿ ಕಂಡೆಹೆನೆಂದಡೆ ಭ್ರಮೆಯವನಲ್ಲ. ಇದನರಿದು ಮರವೆಗೆ ತೆರಹಿಲ್ಲದಿರ್ಪ, ನಿಃಕಳಂಕ ಮಲ್ಲಿಕಾರ್ಜುನನ ಒಡಗೂಡಿದವನೇ.