Index   ವಚನ - 77    Search  
 
ಅಣೋರಣೀಯಾನ್ ಮಹತೋ ಮಹೀಯಾನ್ ಎಂಬ ಶ್ರುತಿ ಹುಸಿ. ಲಿಂಗವಿದ್ದ ಠಾವಿನಲ್ಲಿ ಪ್ರಳಯವುಂಟೆ? ಭಕ್ತರ ಭಾವದಲ್ಲಿರ್ಪನಲ್ಲದೆ, ಮತ್ತೆಲ್ಲಿಯೂ ಇಲ್ಲ ಗುಹೇಶ್ವರನು.