Index   ವಚನ - 185    Search  
 
ಒಡಲಿಲ್ಲದೆ ಆತ್ಮನಿರಬಲ್ಲುದೆ ? ಕ್ರೀಯಿಲ್ಲದೆ ಸತ್ಯ ನಿಲಬಲ್ಲುದೆ ? ಭಾವವಿಲ್ಲದೆ ವಸ್ತು ಈಡಪ್ಪುದೆ ? ಒಂದರಾಸೆಯಲ್ಲಿ ಒಂದ ಕಂಡು, ದ್ವಂದ್ವನೊಂದು ಮಾಡಿ, ಒಂದೆಂಬುದನರಿತು, ಪ್ರಾಣಕ್ಕೆ ಸಂಬಂಧವ ಮಾಡಿ, ಕೂಡಿಯಿದ್ದುದು ಪ್ರಾಣಲಿಂಗ. ಆ ಉಭಯದ ಸಂದಳಿದುದು, ಐಕ್ಯಾನುಭಾವ, ನಿಃಕಳಂಕ ಮಲ್ಲಿಕಾರ್ಜುನಾ.