Index   ವಚನ - 201    Search  
 
ಕಕ್ಷೆ, ಕರಸ್ಥಲ, ಉತ್ತಮಾಂಗ, ಉರಸೆಜ್ಜೆ, ಮುಖಸೆಜ್ಜೆ, ಅಮಳೋಕ್ಯ, ಇಂತೀ ಷಟ್‍ಸ್ಥಾನ ಲಿಂಗಸಂಬಂಧವೆಂಬ ಅಂಗಹೀನರ ಮುಖವ ನೋಡಲಾಗದು. ಉಂಗುಷ್ಠದಲ್ಲಿ ಸರ್ಪ ದಷ್ಟವಾದಡೆ, ದೇಹವೆಲ್ಲ ತದ್ವಿಷವಾದ ತೆರೆದಂತೆ, ಆ ತೆರ ಸರ್ವಾಂಗಲಿಂಗಿಗೆ ಉಂಟಿಲ್ಲವೆಂಬುದ ನೀವೆ ಬಲ್ಲಿರಿ. ಇದು ಕಾರಣ, ವಿಷಕ್ಕೆ ಸ್ಥಾಪ್ಯವಿಲ್ಲ, ಸರ್ವಾಂಗಲಿಂಗಿಗೆ ಷಟ್‍ಸ್ಥಾನವಿಲ್ಲ. ಇಂತೀ ವ್ಯರ್ಥರು ಕೆಟ್ಟ ಕೇಡ ನೋಡಿ ದೃಷ್ಟವಾಗಿ, ಎನಗೆ ನಾಚಿಕೆಯಾಯಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.