Index   ವಚನ - 210    Search  
 
ಕಣ್ಣು ಕಳೆದು ದೃಷ್ಟಿ ಕಾಬುದ ಕಂಡೆ. ಬಯಲು ಬಡಿವಡೆಯಿಸಿಕೊಂಡು, ಬಂಧನದಲೊಡಗೂಡುವುದ ಕಂಡೆ. ಈ ಅಂಗವನೂ ನಿರಂಗವನೂ ಉಭಯಭಾವವಳಿದು ತಿಳಿಯಲಾಗಿ, ನಿಃಕಳಂಕ ಮಲ್ಲಿಕಾರ್ಜುನಲಿಂಗ, ತನ್ನೊಳಗಾದ ಚೋದ್ಯ.