Index   ವಚನ - 209    Search  
 
ಕಣ್ಣಿಲ್ಲದವಂಗೆ ಬಣ್ಣಬಚ್ಚಣೆಯೇಕೆ ? ಮನ್ನಣೆಯಿಲ್ಲದ ಠಾವಿನಲ್ಲಿ ಅಣ್ಣ ಅಪ್ಪ ಎನಲೇಕೆ ? ನನ್ನಿಯ ಗುಣವಿಲ್ಲದಲ್ಲಿಗೆ, ಪನ್ನಗಧರನ ಶರಣರು ಮತ್ತಲ್ಲಿಗೆ ಹೋದಡೆ, ಕಾಲಿಗೆ ತಾಗಿದ ಸರಳ ಕಂತಾಯಿತ್ತು. ಬಲ್ಲವರಿಗೆ ಇದೇ ಗುಣವೆಂದೆ, ಪ್ರಾಣವಲ್ಲಭ ನಿಃಕಳಂಕ ಮಲ್ಲಿಕಾರ್ಜುನಾ.