Index   ವಚನ - 221    Search  
 
ಕಲ್ಲನೊಡೆದು ಕಲ್ಲು ಒಡಗೂಡುವಂತಾಗಬಲ್ಲಡೆ ಇಷ್ಟಲಿಂಗಸಂಬಂಧಿ. ಮಣ್ಣಿನಲ್ಲಿ ಸುಟ್ಟ ಓಡು ಮನ್ನಿನಂತಾಗಬಲ್ಲಡೆ ಭಾವಲಿಂಗಸಂಬಂಧಿ. ಇಷ್ಟಭಾವವನರಿವ ಆ ಚಿತ್ತ ದೃಷ್ಟವನರಿವುದಕ್ಕೆ ಶ್ರುತದೃಷ್ಟವೆಂತುಟೆಂದಡೆ: ವಾರಿಕಲ್ಲು ನೋಡ ನೋಡಲಿಕ್ಕೆ ನೀರಾದಂತೆ. ಇಷ್ಟ ಭಾವ ಕರಿಗೊಂಡು, ನಿಶ್ಚಯಪದವೆಂಬ ಗೊತ್ತ ಮುಟ್ಟದೆ, ಅದು ಸಶ್ಚಿತ್ತವಾದಲ್ಲಿ, ಪ್ರಾಣಲಿಂಗಸಂಬಂಧಿ, ನಿಃಕಳಂಕ ಮಲ್ಲಿಕಾರ್ಜುನಾ.