ಕಾಡೆಮ್ಮೆಯ ಹಾಲ, ಊರ ಕೋಣ ಕುಡಿದು,
ಮತ್ತಾರನೂ ಲೆಕ್ಕಿಸದೆ, ಬಹುಜನರ ನೋಯಿಸಿ ಬರುವಲ್ಲಿ,
ಒಂದಾಡಿನ ಬಾಲದ ಹೊಯ್ಲಿಗಂಜಿ ಓಡಿಹೋಯಿತ್ತು,
ನಿಃಕಳಂಕ ಮಲ್ಲಿಕಾರ್ಜುನಲಿಂಗವ ಭೇದಿಸಲರಿಯದೆ.
Art
Manuscript
Music
Courtesy:
Transliteration
Kāḍem'meya hāla, ūra kōṇa kuḍidu,
mattāranū lekkisade, bahujanara nōyisi baruvalli,
ondāḍina bālada hoyligan̄ji ōḍ'̔ihōyittu,
niḥkaḷaṅka mallikārjunaliṅgava bhēdisalariyade.