Index   ವಚನ - 234    Search  
 
ಕಾಬ ಕಣ್ಣಿದ್ದು ಕನ್ನಡಿಯ ನೋಡುವನಂತೆ, ನಡೆವ ಕಾಲಿದ್ದು ದಡಿಯನೂರಿ ನಡೆವನಂತೆ, ಇರುವ ಕೈಯಿದ್ದು ಕೈದ ಹಿಡಿದು ಇರಿವನಂತೆ, ದೃಷ್ಟಕ್ಕೆ ದೃಷ್ಟವ ಕೊಟ್ಟು, ನೀ ತಪ್ಪಿಸಿಕೊಂಬರೆ, ನಿಃಕಳಂಕ ಮಲ್ಲಿಕಾರ್ಜುನಾ ?