Index   ವಚನ - 249    Search  
 
ಕಾಯ ಹೋಗಿ ಕರ್ಮವ ಮಾಡಿ, ಜೀವಕ್ಕೆ ಬಾಧೆಯ ತಂದಿತ್ತೆಂಬರು. ಆ ಜೀವವಿಲ್ಲದೆ ಕಾಯ ಹೋಗಿ ಕರ್ಮವ ಮಾಡುವಾಗ, ಅದಾವುದರ ಬಲುಹೋ ? ಕಾಯ ನಾನು, ಜೀವ ನೀನು, ನನಗೂ ನಿನಗೂ ಸಮ ಹುದುಗು. ಎನ್ನನೇಕೆ ಕಾಡಿಹೆ ? ಗನ್ನತನವೆ ? ಹೇಳಾ ಚೆನ್ನ, ನಿಃಕಳಂಕ ಮಲ್ಲಿಕಾರ್ಜುನಾ.