Index   ವಚನ - 261    Search  
 
ಕುರಿ ಕುನ್ನಿ ಮೊದಲಾಗಿರ್ದವು ಒಡೆಯನ ಬಲ್ಲವು. ಅರ್ಚಿಸಿ ಪೂಜಿಸಿ ಭಾವಿಸಿ ಏಕೆ ಅರಿಯೊ? ಅಯ್ಯಾ ಹೋಯಿತ್ತು ಭಕ್ತಿ, ಮ[ಳ]ಲ ಕೂಡಿದೆಣ್ಣೆಯಂತೆ. ಹೋಯಿತ್ತು ಪೂಜೆ, ಪುರೋಹಿತನ ಕೊಂದು ಪುರಾಣವ ಕೇಳಿದಂತೆ. ತಾ ಮಾಡುವ ಭಕ್ತಿಯ, ತಾ ಮಾಡುವ ಸತ್ಯವ, ತಾ ಮಾಡುವ ಸದಾಚಾರವನರಿಯದೆ, ಮಾಡುವ ಭಕ್ತ[ನ] ಮನೆಯಲ್ಲಿ ಹೊಕ್ಕುಂಡ ಜಂಗಮಕ್ಕೆ ಏಳನೆಯ ಪಾತಕ. ಆ ಜಂಗಮಪ್ರಸಾದವ ಕೊಂಡ ಭಕ್ತಂಗೆ, ಹುಲಿ ಕವಿಲೆಯ ತಿಂದು, ಮಿಕ್ಕುದ ನರಿ ತಿಂದಂತೆ, ನಿಃಕಳಂಕ ಮಲ್ಲಿಕಾರ್ಜುನಾ.