Index   ವಚನ - 262    Search  
 
ಕುರುಡನ ಮುಂದೆ ಗುಣಮಣಿ ಇದ್ದಡೆ, ಅದ ಎಡಹುವನಲ್ಲದೆ ಕಾಣಲರಿಯ. ಸರ[ಟ]ನ ಮುಂದೆ ಸತ್ಯವಿದ್ದಡೆ ನಿಶ್ಚಯಿಸಬಲ್ಲನೆ ? ಬರಡಿಯ ಕೈಯಲ್ಲಿ ಮಕ್ಕಳಿದ್ದಡೆ ತೊರೆವುದೆ ಮೊಲೆ ? ಅರಿವುಹೀನರಂಗದಲ್ಲಿ ಕುರುಹಿರಲಾಗಿ ಅರಿಯಬಲ್ಲರೆ ? ಇವು ಬರಿಯಮಾತಿನ ಸೊಲ್ಲೆಂದೆ. ಎನ್ನೊಡೆಯ ಕೈಯ ಗಡಿಗೆಯ ಬಿಡಿಸಾ, ನಿಃಕಳಂಕ ಮಲ್ಲಿಕಾರ್ಜುನಾ.