Index   ವಚನ - 269    Search  
 
ಕುಸುಮದಲ್ಲಿ ವಾಸನೆಯಿದ್ದಡೇನು ಅದು ಎಸೆಯದನ್ನಕ್ಕರ ? ಕುಶಲನಲ್ಲಿ ರಸಿಕವಿದ್ದಡೇನು ಅದು ಎಸಗದನ್ನಕ್ಕರ ? ಕುಟಿಲದ ವಸ್ತು ಕೈಯಲ್ಲಿದ್ದಡೇನು, ಅದು ಒಸೆದು ಪ್ರಾಣವ ಬೆರ[ಸದ]ನ್ನಕ್ಕರ ? ಇಂತೀ ಹುಸಿನುಸುಳ ಕಲಿತು ಬೆರಸಿದೆ ಲಿಂಗವನೆಂದಡೆ, ಕಟ್ಟೋಗರದ ಮೊಟ್ಟೆಯಂತೆ, ಬಿಟ್ಟ ಶಕಟದಂತೆ, ತೃಷೆಯ ಗಡಿಗೆಯಂತೆ, ಇದು ಸಹಜವಲ್ಲ ಲಿಂಗೈಕ್ಯರಿಗೆ ನಿಃಕಳಂಕ ಮಲ್ಲಿಕಾರ್ಜುನಾ.