Index   ವಚನ - 270    Search  
 
ಕುಸುಮದೊಳಗಣ ಗಂಧ ಹೋದ ಮತ್ತೆ, ಕುಸುಮವನಾರು ಬಲ್ಲರು ? ದರುಶನದಲ್ಲಿ ಜ್ಞಾನವಿಲ್ಲದ ಮತ್ತೆ, ದರುಶನವನಾರು ಬಲ್ಲರು ? ಮಾತು ಕಲಿತು ನುಡಿವರಲ್ಲಿ, ನಿರ್ಜಾತನ ನೆಲೆ ಇಲ್ಲದಲ್ಲಿ, ಮಾತನಾರು ಬಲ್ಲರು ? ಇಷ್ಟನರಿಯದೆ ಇದ್ದಡೆ, ಇವರೆಲ್ಲರೂ ಭ್ರಾಂತುಯೋಗಿಗಳೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.