Index   ವಚನ - 275    Search  
 
ಕೃತಯುಗದಲ್ಲಿ ಕುಂಜರನೆಂಬ ಆನೆಯ ತಿಂದರು ವಿಪ್ರರು. ತ್ರೇತಾಯುಗದಲ್ಲಿ ಅಶ್ವನೆಂಬ ಕುದುರೆಯ ತಿಂದರು ವಿಪ್ರರು. ದ್ವಾಪಾರದಲ್ಲಿ ಮಹಿಷನೆಂಬ ಕೋಣನಂ ತಿಂದರು ವಿಪ್ರರು. ಕಲಿಯುಗದಲ್ಲಿ ಅಜನೆಂಬ ಹೋತ ತಿಂದರು ವಿಪ್ರರು. ಇಂತು ಅನಂತ ಯುಗಂಗಳಲ್ಲಿ ಅನಂತ ಪ್ರಾಣಿವಧೆಯಂ ಮಾಡಿದರು. ಇದಕ್ಕೆ ಕೊಟ್ಟು, ಸೆರಗು ಹಾಕಿದ ಮುಂಡಿಗೆಯು ಇದು ಯಥಾರ್ಥ, ನಿಃಕಳಂಕ ಮಲ್ಲಿಕಾರ್ಜುನಾ.