Index   ವಚನ - 278    Search  
 
ಕೆಸರ ತೊಳೆವರಲ್ಲದೆ ಉದಕವ ತೊಳೆವರುಂಟೆ ಅಯ್ಯಾ ? ಕನ್ನಡಿಯ ಬೆಳಗುವರಲ್ಲದೆ ಮಣ್ಣ ಬೆಳಗುವರೆ ಅಯ್ಯಾ ? ಹಾಲಿಂಗಂತರವಲ್ಲದೆ ಕೀಳಿಂಗೆ ಮೇಲುಂಟೆ ಅಯ್ಯಾ ? ಕಾಳುಹೃದಯರಲ್ಲಿ ಪ್ರವೀಣರಿಗೆ ತೆರಪಿಲ್ಲ. ಅವರಿಗದೇ ಭಂಗ, ನಿಃಕಳಂಕ ಮಲ್ಲಿಕಾರ್ಜುನಾ.