Index   ವಚನ - 284    Search  
 
ಕೊರಳ ಕಟ್ಟಿದ ನೇಣು ತಿರುಗಲಾಗಿ, ತನ್ನ ಸುತ್ತಿ ತಾ ಬಿದ್ದುದಕ್ಕೆ ಕಟ್ಟಿದವನ ದುಷ್ಟನೆಂಬುದು ಕಷ್ಟವಲ್ಲವೆ ? ತನ್ನ ಭಕ್ತಿಯ ತಾನೊಪ್ಪಿ, ಅದರ ಚನ್ನನರಿಯದೆ, ಇದಿರಿನಲ್ಲಿ ಅನ್ಯಾಯವೆಂಬ ಕನ್ನಗಳ್ಳರ ನೋಡಾ, ನಿಃಕಳಂಕ ಮಲ್ಲಿಕಾರ್ಜುನಾ.