Index   ವಚನ - 285    Search  
 
ಕೊರಳಿಗೆ ಒಂದು ನೇಣಿನಲ್ಲಿ ಸಂದೇಹ ಬಿಡದು. ಎರಡು ನೇಣಿನಲ್ಲಿ ಹಿಂಗಿ ಹೋಗದು, ಮೂರು ನೇಣಿನಲ್ಲಿ ಮುಕ್ತಾಯವಾಗದು. ಹಲವು ನೇಣಿನಲ್ಲಿ ಕಟ್ಟುವಡೆದುದು ಕೂಸು, ಅದಕ್ಕೆ ಒಲವರವೇಕೆ, ನಿಃಕಳಂಕ ಮಲ್ಲಿಕಾರ್ಜುನಾ.