ತನು ನಿರ್ವಾಣವೊ, ಮನ ನಿರ್ವಾಣವೊ, ಭಾವ ನಿರ್ವಾಣವೊ ?
ತ್ರಿವಿಧ ತನಗಿಲ್ಲದ ನಿರ್ವಾಣವೊ ? ಇದ ನಾ ನುಡಿಯಲಂಜುವೆ.
ತೊಟ್ಟ ಘಟಧರ್ಮಕ್ಕೆ ಬೇಡೂದೆ,
ಲೆಕ್ಕವಿಲ್ಲದೆ ಆಸೆ ಮನದೊಳಗೆ ಹೊಕ್ಕು ತಿರುಗಾಡುತ್ತ ?
ಇಂತೀ ಚಿಕ್ಕಮಕ್ಕಳಿಗೆಲ್ಲಿಯದೊ ನಿರ್ವಾಣ,
ಘಟ್ಟಿವಾಳಂಗಲ್ಲದೆ ನಿಃಕಳಂಕ ಮಲ್ಲಿಕಾರ್ಜುನಾ ?
Art
Manuscript
Music
Courtesy:
Transliteration
Tanu nirvāṇavo, mana nirvāṇavo, bhāva nirvāṇavo?
Trividha tanagillada nirvāṇavo? Ida nā nuḍiyalan̄juve.
Toṭṭa ghaṭadharmakke bēḍūde,
lekkavillade āse manadoḷage hokku tirugāḍutta?
Intī cikkamakkaḷigelliyado nirvāṇa,
ghaṭṭivāḷaṅgallade niḥkaḷaṅka mallikārjunā?