Index   ವಚನ - 375    Search  
 
ತನುವ ನೆಮ್ಮಿ ಕಾಬ ಮನವಿಲ್ಲ. ಮನವ ನೆಮ್ಮಿ ಕಾಬ ಅರಿವಿಲ್ಲ. ಅರಿವ ನೆಮ್ಮಿ ಕಾಬ ಕುರುಹಿಲ್ಲ. ಬರುದೊರೆ ಹೋಯಿತ್ತಲ್ಲ ಎನ್ನ ಬಾಲಲೀಲೆ. ಅಗಣಿತ ಅಗೋಚರವ ನೆರೆಯರಿವುದಕ್ಕೆ ಕುರುಹ ತೋರುವರ ನಾ ಕಾಣೆ, ನಿಃಕಳಂಕ ಮಲ್ಲಿಕಾರ್ಜುನಾ.