Index   ವಚನ - 377    Search  
 
ತನುವಿಂಗೆ ಲಿಂಗ ಬಾಹಾಗ ಕಂಕುಳ ಕೂಸೆ ? ಮನಕ್ಕೆ ಲಿಂಗ ಬಾಹಾಗ ತೊಂಡಿನ ದನವೆ ? ಕಂಡಕಂಡವರಂಗದಲ್ಲಿ ಹಿಂಗಿಹನೆಂದಡೆ, ಬಂಧುಗಳ ಮನೆಯಲಂದಣಗಾರನೆ ? ಇವರಂದದ ಮಾತು ಸಾಕು. ಲಿಂಗವಿಪ್ಪೆಡೆಯ ಹೇಳಿಹೆ ಕೇಳಿರಣ್ಣಾ. ಸುಖಿಯಲ್ಲದೆ ದುಃಖಿಯಲ್ಲದೆ, ಆಗಿಗೆ ಮನಗುಡದೆ, ಚೇಗಿಗೆ ದುಃಖಿತನಾಗದೆ, ಕಂಡಕಂಡವರಲ್ಲಿ ಭಂಡ ಗೆಲಿಯದೆ, ತೊಂಡಿನ ಜೀವದನದಂತೆ, ಬಂದು ಹೊಯ್ವವರನರಿಯದೆ, ಇವರಂದವನರಿಯ ಮತ್ತೆ ಉಭಯದ ಸಂದಳಿದು, ಒಂದೂ ಎನ್ನದಿಪ್ಪುದೆ ಲಿಂಗೈಕ್ಯ, ನಿಃಕಳಂಕ ಮಲ್ಲಿಕಾರ್ಜುನಾ.