ತನುವಿನ ಮೇಲಿಪ್ಪ ಲಿಂಗಕ್ಕೆ, ಅನವರತ ಬಿಡದೆ ನೆನಹಿರಬೇಕೆಂಬರು.
ಅಂಗದ ಮೇಲಣ ಲಿಂಗವ, ಪ್ರಾಣಸಂಬಂಧವ ಮಾಡುವ ಪರಿ ಇನ್ನೆಂತೊ ?
ಇದರಂದವನರಿಯದೆ ತ್ರಿಭಂಗಿಯಲ್ಲಿ ಸಿಕ್ಕಿ, ಬೆಂದವರಿಗೇಕೆ ಲಿಂಗದ ಸುದ್ದಿ,
ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Tanuvina mēlippa liṅgakke, anavarata biḍade nenahirabēkembaru.
Aṅgada mēlaṇa liṅgava, prāṇasambandhava māḍuva pari innento?
Idarandavanariyade tribhaṅgiyalli sikki, bendavarigēke liṅgada suddi,
niḥkaḷaṅka mallikārjunā.