Index   ವಚನ - 379    Search  
 
ತನುವಿನಾಶೆಯ ಬಿಟ್ಟು ಕಂಡೆಹೆನೆಂದಡೆ, ಗುರುವಿನ ಹಂಗು ಬಿಡಬೇಕು. ಮನಾದಾಶೆಯ ಬಿಟ್ಟು ಕಂಡೆಹೆನೆಂದಡೆ, ಲಿಂಗದ ಹಂಗು ಬಿಡಬೇಕು. ಸರ್ವವ್ಯಾಪಾರದ ಹಿಂಗಿ ಕಂಡೆಹೆನೆಂದಡೆ, ಜಂಗಮದ ಹಂಗು ಬಿಡಬೇಕು. ಒಂದ ಬಿಟ್ಟು, ಒಂದ ಕಂಡೆಹೆನೆಂದಡೆ, ಒಂದಕ್ಕೂ ನೆಲೆಯಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.