Index   ವಚನ - 383    Search  
 
ತರಬಾರದ ಠಾವಿನಲ್ಲಿ ಪರುಷರಸವಿದ್ದರೇನೋ ? ಹತ್ತಬಾರದ ಠಾವಿನಲ್ಲಿ ಸಂಜೀವನಫಳವಿದ್ದರೇನೋ ? ಲಿಂಗವನರಿಯದ ಠಾವಿನಲ್ಲಿ ವೇಷಯುಕ್ತರಿದ್ದರೇನೋ ? ಜಂಗಮವನರಿಯದ ಠಾವಿನಲ್ಲಿ ತ್ರಿವಿಧವಿಧ ಸಮೃದ್ಧಿಯಾಗಿದ್ದರೇನೋ ? ಆಪ್ಯಾಯನವಡಿಸಿದಲ್ಲಿ ಆಪ್ಯಾಯನ ಛೇದಿಸಿದಲ್ಲಿಯೆ ಸಂಜೀವನವೊಳಗಾಯಿತ್ತು. ಸಂಗದ ಭೇದದಿಂದ ಮಂಗಳದ ಬೆಳಗು. ನಿಜ ನೆಲೆಗೊಳಲಿಕೆ ಲಿಂಗವಾಯಿತ್ತು. ಅದು ಕಾರಣ, ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಆ ಶರಣ ಉರಿವುಂಡ ಕರ್ಪುರದಂತೆ.