Index   ವಚನ - 384    Search  
 
ತಲೆಯನಿತ್ತವಂಗೆ ನಯನದ ಹಂಗೇಕೆ ? ಮನವನಿತ್ತವಂಗೆ ತನುವಿನ ಹಂಗೇಕೆ ? ಮೋಹವನಿತ್ತವಂಗೆ ಅಪಮಾನದ ಹಂಗೇಕೆ ? ಇಂತೀ ಭೇದವನರಿದು ಕಳೆದುಳಿದವಂಗೆ, ಮಾತಿನ ನೀತಿ ಯಾಕೆ, ನಿಃಕಳಂಕ ಮಲ್ಲಿಕಾರ್ಜುನಾ ?