Index   ವಚನ - 385    Search  
 
ತಲೆಯ ಹಿಡಿಯಲರಿಯದೆ ನಡುವ ಹಿಡಿದ ಮತ್ತೆ, ಕಚ್ಚದೆ ಸರ್ಪನೇನ ಮಾಡುವುದು ? ಹಗೆಯ ಕೊಲಹೋಗಿ, ಅವನ ಕಡುಗಲಿತನಕ್ಕಂಜಿ ಅಡಿಗೆರಗಿದಡೆ, ಅವ ಒಡಗೂಡಿ ಇರಿಯದೆ ಮಾಣ್ಬನೆ ? ಮೃಡನಡಿಯನರಿಯದೆ ನರಕದಲ್ಲಿ ಬೀಳುವ ಕುರಿಗಳಿಗೇಕೆ, ನೆರೆ ಅರಿವು ? ಕರಿಗೊಂಡವಂಗಲ್ಲದೆ ಬರಿಮಾತಿಂಗುಂಟೆ, ನಿಃಕಳಂಕ ಮಲ್ಲಿಕಾರ್ಜುನಾ ?