Index   ವಚನ - 388    Search  
 
ತಾಗಿದ ಮತ್ತೆ ಬಾಗುವರೆಂಬುದನೆಲ್ಲರೂ ಬಲ್ಲರು. ಸೋಂಕಿದ ಮತ್ತೆ ಅರ್ಪಿತವೆಂಬುದನೆಲ್ಲರೂ ಬಲ್ಲರು. ಅರ್ಪಿತ ಅನರ್ಪಿತವೆಂಬುದನು ಮುಂದಕ್ಕೆ ಮುನ್ನವರಿದು, ಭೇದಿಸುವ ಅರ್ಪಿತ ಅವಧಾನಿಗೆ ಬಿಡುಮುಡಿ ಇಲ್ಲವೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.