Index   ವಚನ - 389    Search  
 
ತಾ ನಡೆಯಲರಿದೆ, ಮೊನೆಯ ಮೆಟ್ಟಿ ಬಯ್ವವನಂತೆ, ತನ್ನ ಇಷ್ಟವ ತಾನರಿಯದೆ, ಕೊಟ್ಟವನ ಕಷ್ಟವ ಮಾಡುವನಂತೆ, ಈ ದೃಷ್ಟವನರಿಯದೆ, ಮೆಟ್ಟಿದ ಹೆಜ್ಜೆಯ ಮೆಟ್ಟುವ ಗಾಣದ ಎತ್ತಿನ ತೆರದಂತೆ, ಇವರಿಗೆ ಇಷ್ಟದ ಶುದ್ಧಿ ಯಾಕೋ, ನಿಃಕಳಂಕ ಮಲ್ಲಿಕಾರ್ಜುನಾ ?