Index   ವಚನ - 398    Search  
 
ತಿಲದ ಮರೆಯ ತೈಲವ ಅರೆದು ಕಾಬ ತೆರದಂತೆ, ಫಲದ ಮರೆಯ ರಸವ ಹಿಳಿದು ಕಾಬ ಸವಿವ ರುಚಿಯಂತೆ, ತೆರೆಯ ಮರೆಯ ರೂಪ ತೆಗೆದು ಕಾಬ ಸುಖದಂತೆ, ಇಷ್ಟದ ಮರೆಯಲ್ಲಿದ್ದ ದೃಷ್ಟವ, ಉಭಯವ ನಿಶ್ಚಿಯಿಸಿದಲ್ಲಿ ಅದು ಪ್ರಾಣಲಿಂಗಸಂಬಂಧ, ನಿಃಕಳಂಕ ಮಲ್ಲಿಕಾರ್ಜುನಾ.