Index   ವಚನ - 415    Search  
 
ದೇವರು ಹುಟ್ಟುವಾಗ ಮಾಯೆ ಕವಳೀಕರಿಸಿ ಬಂ[ದುದೆ]ಂಬರು. ಅದು ಬಣ್ಣಬಚ್ಚಣಿಕೆಯ ಮಾತು. ದೇವಪದವಾದ ಬಳಿಕ ಮತ್ತೆ ದೇವರಿಗುಂಟೆ ಮೂರುಕುಲ ? ಅವ ಬೇಡಿದವರಿಗೀವ ಭಾವಜ್ಞನಾಗಿ. ಭಾವಕ್ಕೆ ಹೊರಗಾದಾತಂಗೆ ಲೀಲೆಯುಂಟೆ ? ಆ ಗುಣ ಚಿಪ್ಪು ಮುತ್ತಿನ ತೆರ. ಕಸ್ತೂರಿ ಶುಕ್ಲದ ತೆರ, ಕದಳಿ ಕರ್ಪುರದ ತೆರ. ಬಂದುದಕ್ಕೆ ಸಂದೇಹವ ಮಾಡಲಿಲ್ಲ. ನಿರಂಗ ನಿರುತ ಸುಸಂಗ ನಿಃಕಳಂಕ ಮಲ್ಲಿಕಾರ್ಜುನಾ, ಇದರಂಗವ ಹೇಳಾ.