ಧರೆಯ ಮೇಲಣ ಮರದಲ್ಲಿ, ಹಿರಿದಿಹ ಕೊಂಬಿನ ತುದಿಯಲ್ಲಿ,
ಅರಿಬಿರಿದಿನ ಪಕ್ಷಿ ಬಂದಿತ್ತು ನೋಡಾ.
ಆ ಪಕ್ಷಿಯ ವರ್ಣ, ಹಾರುವ ರಟ್ಟೆ ಕೆಂಪು, ತೋರಿಹ ರಟ್ಟೆ ಕಪ್ಪು.
ಮೀರಿಹ ರಟ್ಟೆಯ ತುಟ್ಟತುದಿಯಲ್ಲಿ ನಾನಾ ವರ್ಣದ ಬಣ್ಣ.
ಆ ಹಕ್ಕಿಯ ಗಳದಲ್ಲಿ ಹೇಮವರ್ಣ, ಆ ಹಕ್ಕಿಯ ತುದಿಯಲ್ಲಿ ಧವಳವರ್ಣ.
ಆ ಹಕ್ಕಿಯ ಹಾರುವ ರಟ್ಟೆಯ ಕಳೆದು, ತೋರಿಹ ರಟ್ಟೆಯ ಮುರಿದು,
ಮೀರಿಹ ರಟ್ಟೆಯ ಬೆಂದು, ಕೊರಳಿನ ಹಳದಿ ಹಾರಿ, ಕೊಕ್ಕಿನ ಬೆಳ್ಪು
ನಿಃಪತಿಯಾಗಿ, ನಿಃಕಳಂಕ ಮಲ್ಲಿಕಾರ್ಜುನ ಸತ್ತನೊ.
Art
Manuscript
Music
Courtesy:
Transliteration
Dhareya mēlaṇa maradalli, hiridiha kombina tudiyalli,
aribiridina pakṣi bandittu nōḍā.
Ā pakṣiya varṇa, hāruva raṭṭe kempu, tōriha raṭṭe kappu.
Mīriha raṭṭeya tuṭṭatudiyalli nānā varṇada baṇṇa.
Ā hakkiya gaḷadalli hēmavarṇa, ā hakkiya tudiyalli dhavaḷavarṇa.
Ā hakkiya hāruva raṭṭeya kaḷedu, tōriha raṭṭeya muridu,
mīriha raṭṭeya bendu, koraḷina haḷadi hāri, kokkina beḷpu
niḥpatiyāgi, niḥkaḷaṅka mallikārjuna sattano.