Index   ವಚನ - 441    Search  
 
ನಾರಿ ಸುತ್ತನಾರೈಕೆಗೊಂಬವನ ಬೇರಿನ ಬಿಲ್ಲ ನುಂಗಿತ್ತು. ಬಿಲ್ಲಿನ ಬಾಗಿನಲ್ಲಿ ಇವರೆಲ್ಲರೂ ಸಿಕ್ಕಿದರು. ಬಿಲ್ಲಿನ ನಾರಿಯನಿಲಿ ಬಂದು ಕಡಿಯಲಾಗಿ, ನಾರಿ ಜಾರಿತ್ತು, ಬಿಲ್ಲು ಮುರಿಯಿತ್ತು. ಬಿಲ್ಲಿನೊಳಗಾಡುವ ಚೊಲ್ಲೆಹಸರವೆಲ್ಲಿಯೂ ಇಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.